ರಾಕಿಂಗ್ ಸ್ಟಾರ್ ಯಶ್ ಅವರನ್ನು ಬಿಗ್ ಸ್ಕ್ರೀನ್ ಮೇಲೆ ನೋಡಿ ತುಂಬಾ ದಿನ ಆಯ್ತು ಅಂತಾ ಅಭಿಮಾನಿಗಳೆಲ್ಲಾ ಬೇಜಾರಾಗಿದ್ದಾರೆ. ಇಂದು ನಾವು ಯಶ್ ಅಭಿಮಾನಿಗಳಿಗಾಗಿ ಕೆಜಿಎಫ್ ಚಿತ್ರದ ನ್ಯೂಸ್ ತಂದಿದ್ದೇವೆ. ಈ ವಿಷಯ ಕೇಳಿದರೆ ಬಹುಶಃ ಕೆಜಿಎಫ್ ಬಗೆಗಿನ ಕುತೂಹಲ ಮತ್ತಷ್ಟು ಜಾಸ್ತಿಯಾಗುತ್ತದೆ.ಕೆಜಿಎಫ್ ಚಿತ್ರದ ಮೇಲೆ ಭರವಸೆ ಮೂಡೋಕೆ ಕಾರಣ ಒಂದು ರಾಕಿಂಗ್ ಸ್ಟಾರ್ ಯಶ್. ಇನ್ನೊಂದು ನಿರ್ದೇಶಕರ ಮೇಲಿನ ಭರವಸೆ, ಪ್ರಶಾಂತ್ ನೀಲ್ ಮೊದಲ ಚಿತ್ರದಲ್ಲೇ ಪ್ರಾಮಿಸಿಂಗ್ ನಿರ್ದೇಶಕ ಅನ್ನೋದನ್ನ ಪ್ರೂವ್ ಮಾಡಿದವರು. ಇದೀಗ ಎರಡನೇ ಚಿತ್ರ ಕೆಜಿಎಫ್ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಆಯಾಮವನ್ನೇ ಸೃಷ್ಟಿಸೋಕೆ ಹೊರಟಿದ್ದಾರೆ. ಇದೀಗ ಪ್ರಶಾಂತ್ ನೀಲ್ ತಮ್ಮ ಸಿನಿಮಾದ ಸೀಕ್ರೆಟ್ ನ್ನು ಫಸ್ಟ್ ಟೈಂ ರಿವೀಲ್ ಮಾಡಿದ್ದಾರೆ.ಒಂದು ಉತ್ತಮ ಟೀಮ್ ಸೇರಿದರೆ ಒಂದು ಒಳ್ಳೆಯ ಸಿನಿಮಾ ಮೂಡಿ ಬರೋಕೆ ಸಾಧ್ಯ. ನಿರ್ದೇಶಕರನ್ನ ಕ್ಯಾಪ್ಟನ್ ಆಫ್ ದ ಶಿಪ್ ಎಂದು ಕರೆಯುತ್ತಾರೆ. ಒಂದು ಉತ್ತಮ ಸಿನಿಮಾ ಮೂಡಿ ಬರಬೇಕು ಅಂದ್ರೆ ಅದಕ್ಕೆ ಮುಖ್ಯ ಕಾರಣ ನಿರ್ದೇಶಕನ ಕೆಲಸ. ಆದ್ರೆ ಕೆಜಿಎಫ್ ಚಿತ್ರ ಉತ್ತಮವಾಗಿ ಬಂದಿರೋದ್ರ ಹಿಂದೆ ನಿರ್ದೇಶಕರ ಹೊರತಾಗಿ ಮೂವರು ವ್ಯಕ್ತಿಗಳಿದ್ದಾರೆ. ಅವರೇ ಸಿನಿಮೊಟೋಗ್ರಫರ್ ಭುವನ್ ಗೌಡ, ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್ ಹಾಗೂ ಆರ್ಟ್ ಡೈರೆಕ್ಟರ್ ಶಿವಕುಮಾರ್.ಶೇಕಡಾ 80ರಷ್ಟು ಭಾಗ ಚಿತ್ರೀಕರಣ ಮುಗಿಸಿರುವ ಕೆಜಿಎಫ್ ನಲ್ಲಿ ಭಾರೀ ಅನುಭವಿ ತಂತ್ರಜ್ಞರಿಲ್ಲ, ಆದ್ರೆ ಅಪೂರ್ವ ತಂತ್ರಜ್ಞರಿಂದ ಕೂಡಿದೆ ಅನ್ನೋದು ಪ್ರಶಾಂತ್ ನೀಲ್ ಅವರ ಅನಿಸಿಕೆ. ಈ ಮೂವರು ಭಾರೀ ಹಳಬರೇನಲ್ಲ ಆದ್ರೆ ಅವರೆಲ್ಲರ ಶ್ರಮ ಕೆಜಿಎಫ್ ಉತ್ತಮವಾಗಿ ಮೂಡಿಬರೋಕೆ ಕಾರಣ. ಕೆಜಿಎಫ್ ಟ್ರೇಲರ್ ರಿಲೀಸ್ ನಂತರ ಜನಗಳೇ ನೋಡ್ತಾರೆ ಅವ್ರ ಕೆಲಸವನ್ನ ಎಂದು ತಮ್ಮ ತಂತ್ರಜ್ಞರನ್ನು ಪ್ರಶಾಂತ್ ನೀಲ್ ಹಾಡಿ ಹೊಗಳಿದ್ದಾರೆ.
Today we have brought KGF movie news for Yash fans.Rocking star Yash looks great on the big screen,the KGF movie has been well done and there are three persons in the past. .watch this video